सत्यकामार्णवोद्भूतः श्रीमत्सत्येष्टसद्गुरुः ।
सतां चिन्तामणिरिव चिन्तितार्थप्रदो भुवि ।।
satyakAmArNavodbhUtaH shrImat satyeShTasadguruH ।
satAM chintAmaNiriva chintitArtharprado bhuvi ।।
Sri Sathyesta Teertha was the pontiff of Shri Uttaradi Matha during the period from1871 to 1872.
His poorvasahrama name was Shri Hattimuttur Narasimhacharya. After being initiated to Vedantha Samrajya, he took up the construction of Brindavana in Atkur, to his beloved guru Shri Satyakama Teertha and performed Mahasamaradhana.
Sri Sathyesta Teertharu, due to his old age, did not extensively travel for propagation of Dvaitha Philosophy. He ruled the vedanta samrajya for a very short time of only 7 months. Shri Sathyesta Teertha ordained Shri Shrinivasacharya as his successor and named him Shri Satyaprakrama Teertha.
He entered Brindavana at Atkur in 1872, Angirasa samvatsara Bhadrapada Shuddha Ekadashi on the banks of river Krishna.
ಶ್ರೀ ಸತ್ಯೇಷ್ಟತೀರ್ಥರು
ಧಾರವಾಡಜಿಲ್ಲೆಯ ‘‘ಹತ್ತಿಮತ್ತೂರು’’ ಪ್ರಸಿದ್ಧ ಪಂಡಿತರ ಊರು. ಪಂ. ನರಸಿಂಹಾಚಾರ್ಯರು ಅಲ್ಲಿಯ ವಿಖ್ಯಾತ ವಿದ್ವಾಂಸರು, ಶ್ರೀಮದುತ್ತರಾದಿ ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀಸತ್ಯಕಾಮತೀರ್ಥರಲ್ಲಿ ವಿಶೇಷ ಅಧ್ಯಯನ ಮಾಡಿದ್ದರು. ಶ್ರೀಮಠದಲ್ಲಿಯೇ ವಾಸವಾಗಿದ್ದರು. ಕೃಷ್ಣಾ ತೀರದ ಆತಕೂರಿನಲ್ಲಿ ಒಮ್ಮೆ ಶ್ರೀಸತ್ಯಕಾಮರು ಇವರಿಗೆ ಸಂನ್ಯಾಸ ನೀಡಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡರು. ಇವರಿಗೆ ಶ್ರೀ ಸತ್ಯೇಷ್ಟತೀರ್ಥರೆಂದು ಹೆಸರಿಸಿದರು.
ವಿಲಕ್ಷಣ ವೈರಾಗ್ಯಶಾಲಿಗಳು ಈ ಸತ್ಯೇಷ್ಟತೀರ್ಥರು. ಆ ಕಾಲಕ್ಕೆ ರಾಜಕೀಯ ಸ್ಥಿತಿಗತಿಗಳು ಅಷ್ಟು ಸರಿಯಾಗಿ ಇರದೇ ಇದ್ದುದರಿಂದ ಇವರು ಎಲ್ಲಿಯೂ ಸಂಚಾರಕ್ಕೆ ತೆರಳಲಿಲ್ಲ. ಆತಕೂರಿನಲ್ಲಿಯೇ ವಾಸಿಸಿದರು. ಉಗ್ರತಪಶ್ಚರ್ಯ, ಪಾಠಪ್ರವಚನ ಇವರ ನಿತ್ಯಕ್ರಮವಾಗಿದ್ದವು. ಕೌಪೀನ ಮಾತ್ರ ಧರಿಸುತ್ತಿದ್ದರು. ಕೃಷ್ಣಾಜಿನದ ಮೇಲೆ ಮಲಗುತ್ತಿದ್ದರು. ಪಾದುಕೆಗಳನ್ನು ಧರಿಸುತ್ತಿದ್ದಿಲ್ಲ. ಪೂರ್ವಾಶ್ರಮದಲ್ಲಿ ಬಡತನ. ಆದರೂ ಪೂರ್ವಾಶ್ರಮದ ಗಳಿಕೆಯನ್ನು ಆಶ್ರಮವಾದ ಮೇಲೆ ಎಲ್ಲ ಸೇರಿಸಿ ಒಂದು ಬಂಗಾರದ ಬಟ್ಟಲು ಮಾಡಿಸಿ, ಅದರ ಮೇಲೆ ತಮ್ಮ ತಾಯಿ ಸೇವೆ ಎಂದು ಬರೆಸಿ ಅದರಿಂದಲೇ ದೇವರಿಗೆ ಸೂತ್ರಪರಮಾನ್ನ ನೈವೇದ್ಯ ಮಾಡುತ್ತಿದ್ದರು. ವೃದ್ಧಾಪ್ಯದಲ್ಲಿಯೇ ಇವರು ಪೀಠದಲ್ಲಿ ವಿರಾಜಿಸಿದ್ದರೂ ಆಡಳಿತ, ಪೂಜಾಕಾರ್ಯಗಳಲ್ಲಿ ಚುರುಕಾಗಿದ್ದರು. ಸದಾ ಪಾಠ ಪ್ರವಚನ ಮಾಡುತ್ತಾ ವರದ ಶ್ರೀನಿವಾಸಾಚಾರ್ಯರ ಉಪನ್ಯಾಸ ನಿರಂತರ ಆಲಿಸುತ್ತಿದ್ದರು. ಹನ್ನೊಂದು ತಿಂಗಳು ಮಾತ್ರ ಪೀಠಾಧಿಪತ್ಯದಲ್ಲಿದ್ದು ಮುಂದೆ ಧಾರವಾಡಜಿಲ್ಲೆಯ ವರದಾ ನದಿಯ ತೀರದ ಮರಡೂರಿನ ಮಹಾ ಪಂಡಿತರಾದ ವಾಯೀ ಶ್ರೀನಿವಾಸಾಚಾರ್ಯರಿಗೆ ಆಶ್ರಮ ನೀಡಿದರು. ಅವರಿಗೆ ಶ್ರೀಸತ್ಯಪರಾಕ್ರಮತೀರ್ಥರೆಂದು ನಾಮಕರಣ ಮಾಡಿದರು. ಭಾದ್ರಪದ ಶುದ್ಧ ಏಕಾದಶಿಯ ದಿನ ಆತಕೂರಿನಲ್ಲಿ ವಂದಾವನ ಪ್ರವೇಶಗೈದರು.
Source - uttaradimath.org
Math | Shri Uttaradi Math |
Name of the Swamiji | Shri Satyeshta Teertharu |
Period | 1871 – 1872 |
Guru | Shri Satyakaama Teertharu |
Shishya | Shri Satyaparakrama Teertharu |
Poorvashrama Name | Shri Hattimuttur Narasimhacharya |
Brindavan Located at | Atkur |
Aradana Month | Bhadrapada |
Paksha | Shukla |
Tithi | Ekadashi |